ರೈತರಿಂದ - ರೈತರಿಗಾಗಿ

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವು ರೈತರ ಹಕ್ಕು, ಭೂಮಿ ಮತ್ತು ಜೀವನೋಪಾಯದ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವತಂತ್ರ ಸಂಘಟನೆ. ಭದ್ರಾ ಸಂತ್ರಸ್ತರ ನ್ಯಾಯಯುತ ಹೋರಾಟಕ್ಕೆ ಬೆಂಬಲ, ಭೂದಾಖಲೆಗಳ ಗೊಂದಲಕ್ಕೆ ಕಾನೂನು ಮಾರ್ಗದರ್ಶನ ಹಾಗೂ ಅಡಿಕೆ ಬೆಳೆಯ ರೋಗಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸುವುದು ನಮ್ಮ ಗುರಿ. ತಜ್ಞರ ಸಲಹೆ ಮತ್ತು ಒಗ್ಗಟ್ಟಿನ ಹೋರಾಟದ ಮೂಲಕ ರೈತರ ಬದುಕನ್ನು ಸಬಲೀಕರಿಸಲು ನಾವು ಸದಾ ಬದ್ಧ.

 

ಭದ್ರಾ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾದ ರೈತರಿಗೆ ಪರ್ಯಾಯ ಜಮೀನು ಮತ್ತು ನ್ಯಾಯಸಮ್ಮತ ಪರಿಹಾರ ಕೊಡಿಸಲು ಸಂಘಟಿತವಾಗಿ ಹೋರಾಡುವುದು.
ಭೂಮಿ ಸಂಬಂಧಿತ ಸಮಸ್ಯೆಗಳು ಮತ್ತು ದಾಖಲೆಗಳ ಗೊಂದಲಗಳ ನಿವಾರಣೆಗೆ ತಜ್ಞರಿಂದ ಸರಳ ಕಾನೂನು ಮಾಹಿತಿ ಹಾಗೂ ಉಚಿತ ವಕಾಲತ್ತು ಸೇವೆ.
ಹಳದಿ ಮತ್ತು ಎಲೆಚುಕ್ಕೆ ರೋಗಗಳಂತಹ ಗಂಭೀರ ಸಮಸ್ಯೆಗಳಿಗೆ ಕೃಷಿ ತಜ್ಞರ ಮೂಲಕ ವೈಜ್ಞಾನಿಕ ಪರಿಹಾರ, ಸಂವಾದ ಮತ್ತು ಕ್ಷೇತ್ರ ಭೇಟಿಗಳ ಮೂಲಕ ಮಾರ್ಗದರ್ಶನ.
ರೈತರಲ್ಲಿ ಅರಿವು ಮೂಡಿಸಲು ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ಅವರ ದೈನಂದಿನ ಬದುಕನ್ನು ಬಲಪಡಿಸಲು ಶ್ರಮಿಸುವ ಸಮರ್ಪಿತ ವೇದಿಕೆ.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ

ರೈತರಿಗಾಗಿ ಸಮರ್ಪಿತ ಸೇವೆಗಳು

ನಮ್ಮ ಸೇವೆಗಳು

ಕಾನೂನು ಮಾರ್ಗದರ್ಶನ

ಸರ್ಕಾರದ ಕಾನೂನು ಕಟ್ಟಳೆಗಳಿಂದ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಿಗೆ ಉಚಿತ ಕಾನೂನು ಸಲಹೆ ಮತ್ತು ವಕೀಲರ ನೇಮಕಾತಿ ಸಹಕಾರ.

Learn More

ರೈತರ ಹಕ್ಕುಗಳ ರಕ್ಷಣೆ

ರೈತರ ಹಕ್ಕುಗಳ ಉಲ್ಲಂಘನೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಿ, ನ್ಯಾಯ ಮತ್ತು ಗೌರವಕ್ಕಾಗಿ ಹೋರಾಟ

Learn More

ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ

ರೈತರಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸರಿಯಾದ, ನಿಖರ ಮಾಹಿತಿಯನ್ನು ತಲುಪಿಸುವ ಸೇವೆ.

Learn More

ರೈತ ಸಂಪರ್ಕ ಮತ್ತು ಸಮನ್ವಯ ಸೇವೆಗಳು

ಪ್ರತಿ ಗ್ರಾಮದ ಪ್ರತಿನಿಧಿಗಳ ಮೂಲಕ ರೈತ ಮತ್ತು ಒಕ್ಕೂಟದ ನಡುವೆ ಸಮನ್ವಯ ಹಾಗೂ ಸಂಪರ್ಕ ಕಾರ್ಯ ನಿರ್ವಹಣೆ.

Learn More

ನಮ್ಮ ಕಚೇರಿಗಳು

ಕಚೇರಿಗಳು

ನರಸಿಂಹರಾಜಪುರ

ನರಸಿಂಹರಾಜಪುರ

ತಾಲೂಕು ಕಚೇರಿ ಹತ್ತಿರ ಮುಖ್ಯರಸ್ತೆ ನರಸಿ೦ಹರಾಜಪುರ - 577134

ಕೊಪ್ಪ

ಕೊಪ್ಪ

ದೇವಕಿಕೃಷ್ಣ ಕಾಂಪ್ಲೆಕ್ಸ್‌ ಸೇತುವೆ ಪಕ್ಕ, ಬಾಳಗಡಿ ಮುಖ್ಯರಸ್ತೆ, ಕೊಪ್ಪ - 577126

0

ತಾಲೂಕುಗಳು

0

ಹೋಬಳಿಗಳು

0 +

ಪದಾಧಿಕಾರಿಗಳು

0 +

ರೈತರು

ರೈತರ ಹಕ್ಕು, ಕಲ್ಯಾಣ ಮತ್ತು ನ್ಯಾಯಕ್ಕಾಗಿ ಕೈಜೋಡಿಸೋಣ.

ರೈತರ ಸಮಸ್ಯೆಗಳಿಗೆ ಬೆಂಬಲ ಬೇಕಾದರೆ?