ಬಕ್ರಿಹಳ್ಳಿ ಏತನೀರಾವರಿ ಯೋಜನೆಗೆ ಅಗತ್ಯ ಅನುದಾನ ನೀಡುವಂತೆ ಒತ್ತಾಯ - ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಪತ್ರಿಕಾಗೋಷ್ಠಿ
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಇಂದು ನರಸಿಂಹರಾಜಪುರದ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿ,
ಬಕ್ರಿಹಳ್ಳ ಏತ ನೀರಾವರಿ ಯೋಜನೆಗೆ ಅಗತ್ಯ ಅನುದಾನ ಕೊರತೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ವಿವರಿಸಿ, ತಕ್ಷಣವೇ ಹಣ ಬಿಡುಗಡೆ ಮಾಡಿ ಯೋಜನೆಯನ್ನು ಸಂಪೂರ್ಣಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
ಹಾಗೆಯೇ, ಅರಣ್ಯ ಇಲಾಖೆಯ ಅನುಮತಿ ವಿಳಂಬದಿಂದ ನಿಂತಿರುವ ಬಹುನಿರೀಕ್ಷಿತ ಹೊನ್ನೇಕೊಡುಗಿ ಏತ ನೀರಾವರಿ ಯೋಜನೆಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಮುಂದುವರಿದು, ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಸೂಕ್ತ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಅದೇ ರೀತಿ, ಹೊನ್ನೇಕೊಡುಗಿ ಸೇತುವೆಯಿಂದ ಹಳೆ ಚಿಕ್ಕಮಗಳೂರು ರಸ್ತೆ ಸಂಪರ್ಕ ಕಾಮಗಾರಿಯನ್ನು ಮಂಜೂರು ಮಾಡಿಸಿ ಜನರಿಗೆ ಜಿಲ್ಲಾ ಕೇಂದ್ರಕ್ಕೆ ಹತ್ತಿರದ ಸಂಪರ್ಕ ವ್ಯವಸ್ಥೆಯನ್ನು ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.
ಹಾಗೂ ಹೊನ್ನೇಕೊಡುಗಿ ಸೇತುವೆ ಕಾಮಗಾರಿಯ ಅನುದಾನ ಬಿಡುಗಡೆಗೆ ಶ್ರಮಿಸಿದ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ರೈತ ಒಕ್ಕೂಟದಿಂದ ಅಭಿನಂದನೆ ಸಲ್ಲಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ರೈತ ಒಕ್ಕೂಟದ ನರಸಿಂಹರಾಜಪುರ ತಾಲೂಕು ಅಧ್ಯಕ್ಷರಾದ ಪ್ರದೀಪ್ ಕಿಚ್ಚೆಬ್ಬಿ, ಸತೀಶ್ ಗದ್ದೆಮನೆ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಂಚಿನಮನೆ, ಕ್ಷೇತ್ರ ಸಂಚಾಲಕರಾದ ಪ್ರದೀಪ್ ನೀಲವಾನಿ, ಕ್ಷೇತ್ರ ಖಜಾಂಚಿಗಳಾದ ವಿಕಾಸ್ ಮಾವಿನಮನೆ, ತಾಲೂಕು ಸಂಚಾಲಕರಾದ ಅಶೋಕ್ ನೀಲುವಾನಿ, ತಾಲೂಕು ಉಪಾಧ್ಯಕ್ಷರಾದ ಅರುಣ್ ಜೈನ್, ಕಸಬಾ ಹೋಬಳಿ ಅಧ್ಯಕ್ಷರಾದ ಕಿರಣ್ ಗುಬ್ಬಿಗ, ಹೋಬಳಿ ಉಪಾಧ್ಯಕ್ಷರಾದ ನಿಶಾಂತ ಭೀಮನರಿ, ರೈತ ಒಕ್ಕೂಟದ ಕಛೇರಿ ಕಾರ್ಯದರ್ಶಿಗಳಾದ ಸಚಿನ್ ಮೂಡಬಾಗಿಲು, ಹಾಗೂ ರೈತ ಮುಖಂಡರುಗಳಾದ ಸುಧಾಕರ ಭೀಮನರಿ, ಮುರುಳಿ ಚನ್ನೇಮನೆ ಅವರು ಉಪಸ್ಥಿತರಿದ್ದರು.
Gallery
Raitha Okkuta
Author at ರೈತ ಒಕ್ಕೂಟ. Passionate about technology and innovation.