ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ನರಸಿಂಹರಾಜಪುರ ತಹಶೀಲ್ದಾರ್ ಭೇಟಿ - ರೈತರ ಹಲವು ಸಮಸ್ಯೆಗಳ ಕುರಿತು ಮನವಿ
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ನರಹಿಂಹರಾಜಪುರ ತಾಲೂಕಿನ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ, ಈ ಕೆಳಕಂಡ ಮಾಹಿತಿಯನ್ನು ನೀಡುವ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಸಹಕಾರ ಕೋರಲಾಯಿತು.
➡️ ನಮ್ಮ ತಾಲೂಕಿನ ಯಾವ ಯಾವ ಗ್ರಾಮದಲ್ಲಿ ಯಾವ ಯಾವ ಸರ್ವೇ ನಂಬರ್‌ಗಳಲ್ಲಿ ಎಷ್ಟು ವಿಸ್ತೀರ್ಣದ ಗೋಮಾಳದ ಜಾಗವನ್ನು ಸೆಕ್ಷನ್ 17 ಮಾಡಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಯಾವ ಕ್ರಮ ಕೈಗೊಳ್ಳಲಾಗಿದೆ ಮತ್ತು ಯಾವ ಯಾವ ಸರ್ವೇ ನಂಬರ್ ಗಳಲ್ಲಿ ಎಷ್ಟು ಎಷ್ಟು ಕಂದಾಯ ಭೂಮಿ ಉಳಿಸಿಕೊಳ್ಳಲಾಗಿದೆ.
➡️ ಪ್ರತಿ 100 ಗೋವುಗಳಿಗೆ ಕನಿಷ್ಟ 30 ಎಕರೆ ಗೋಮಾಳವನ್ನು ಮೀಸಲಿಡಬೇಕೆಂದು ಸರ್ಕಾರದ ಆದೇಶವಿರುವುದು ಸರಿ ಅಷ್ಟೇ, ಈ ಬಗ್ಗೆ ತಾಲೂಕಿನಲ್ಲಿರುವ ಗೋವುಗಳ ಸಂಖ್ಯೆ ಅನುಗುಣವಾಗಿ ತಾಲೂಕಿನ ಯಾವ ಯಾವ ಗ್ರಾಮದಲ್ಲಿ ಯಾವ ಯಾವ ಸರ್ವೇ ನಂಬರ್ ಅಲ್ಲಿ ಎಷ್ಟು ಎಷ್ಟು ಎಕರೆ ಗೋಮಾಳವನ್ನು ಮೀಸಲಿಡಲಾಗಿದೆ ಮಾಹಿತಿ ತಿಳಿಸಿ.
➡️ 1980 ರ ನಂತರ ಎಷ್ಟು ರೈತರಿಗೆ ಹಕ್ಕು ಪತ್ರ ಹಾಗೂ ಸಾಗುವಳಿ ಪತ್ರ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡಿ.
➡️ ಸರ್ಕಾರ ನಿಯೋಜಿಸಿರುವ ಎಸ್‌ಐಟಿಯಲ್ಲಿರುವ ಅಧಿಕಾರಿಗಳಾದ ವಿ.ಎ ಹಾಗೂ ಆರ್.ಐ ಮತ್ತು ಸರ್ವೇಯರ್ ಮತ್ತು ಅರಣ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಸರ್ವೇ ವೇಳೆ ಕಡ್ಡಾಯವಾಗಿ ಸ್ಥಳೀಯ ಗ್ರಾಮ ಪಂಚಾಯತಿ ಪಿ.ಡಿ.ಓ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿ ರೈತರ ಭೂಮಿ, ಶಾಲೆ, ಆಟದ ಮೈದಾನ, ಸ್ಮಶಾನ, ಆಶ್ರಯ ನಿವೇಶನ ಇತ್ಯಾದಿಗಳಿಗೆ ಮುಂದಿನ 50 ವರ್ಷಗಳಲ್ಲಿ ಆಗಬಹುದಾದ ಜನಸಂಖ್ಯೆ ಅಂದಾಜಿಸಿ ನಾಗರಿಕ ಅಗತ್ಯಗಳನ್ನು ಮೀಸಲಿಟ್ಟು ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಡ್ ವ್ಯಾಪ್ತಿಗೆ ನಕ್ಷೆ ತಯಾರಿಸಬೇಕು. ಹಾಗೆ ಇದುವರೆಗೂ ಸರ್ವೇ ಕಾರ್ಯ ನಡೆಸಿ ತಯಾರಿಸಿರುವ ನಕ್ಷೆಗೆ ಸಂಬಂಧಪಟ್ಟಂತೆ ಎಲ್ಲಾ ಅಧಿಕಾರಿಗಳ ಸಹಿ ಹಾಕಿರುವ ನಕ್ಷೆಯ ಕಲರ್ ಪ್ರತಿಯನ್ನು ನೀಡಬೇಕಾಗಿ ಕೋರಿದೆ.
➡️ ಪೋಡಿ ಮಾಡಲು ಪಹಣಿಯಲ್ಲಿ ಅರಣ್ಯ ಎಂದು ನಮೂದಾಗಿರುವ ಸರ್ವೇ ನಂಬರ್ ಗಳನ್ನು ಮಾತ್ರ ಅರಣ್ಯ ಇಲಾಖೆ ಎನ್ ಓ ಸಿ (NOC) ಗೆ ಕಳುಹಿಸಬೇಕು. ಅರಣ್ಯ ಎಂದು ನಮೂದಾಗದೆ ಇರುವ ಸರ್ವೇ ನಂಬರ್ ಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಿ ರೈತರಿಗೆ ಪೋಡಿ ಕಾರ್ಯ ಮಾಡಿಸಲು ವಿಳಂಬ ಆಗದೆ ಇರುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.
➡️ ಜಂಟಿ ಸರ್ವೆಯಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
➡️ ಈಗಾಗಲೇ ಸೆಕ್ಷನ್ 4/1 ಪ್ರಕರಣಗಳಲ್ಲಿ ಮೀಸಲು ಅರಣ್ಯಕ್ಕೆ ಎನ್ಕ್ಲೋಷರ್ಸ್ ಗಿಂತ ಹೆಚ್ಚಿನ ಭೂಮಿಗಳನ್ನು ಸೆಕ್ಷನ್ 17 ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಹೆಚ್ಚುವರಿ ಭೂಮಿಗಳನ್ನು ಕಂದಾಯ ಇಲಾಖೆ ಎಲ್ಲೇ ಸಾರ್ವಜನಿಕ ಉಪಯೋಗಕ್ಕೆ ಕಾಯ್ದಿರಿಸಬೇಕು. ಹಾಗೆ ಈಗಾಗಲೇ ವ್ಯತ್ಯಾಸ ಆಗಿರುವ ಕಂದಾಯ ಭೂಮಿಯ ವಿವರಗಳನ್ನು ನೀಡಬೇಕಾಗಿ ಕೋರಿದೆ.
➡️ ರೈತರು ನಮೂನೆ 57 ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನಮೂನೆ 53ಕ್ಕೆ ಪರಿವರ್ತಿಸಿ, ಅರ್ಹ ಪ್ಲಾಂಟೇಶನ್ ರೈತರಿಗೂ ಸಾಗುವಳಿಗೂ ನೀಡಬೇಕು. ಮತ್ತು ರೈತರಿಂದ ಪಡೆಯಲಾಗಿರುವ ಲೀಜ್ ಅರ್ಜಿಗಳ ಶೀಘ್ರವಿಲೇವಾರಿ ಮಾಡಬೇಕು.
➡️ ಸರ್ಕಾರ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವಾಪಸ್ಸು ಪಡೆಯಲಾದ ಭೂಮಿಗಳ ಸಂಬಂಧಿಸಿದ ಜನವರಿ 3, 1991ರ ಆದೇಶವನ್ನು ಕಡ್ಡಾಯವಾಗಿ ಕಂದಾಯ ಇಲಾಖೆ ಪಾಲಿಸಬೇಕು. ಹಾಗೂ ಈಗಾಗಲೇ ಈ ಆದೇಶವನ್ನು ಪಾಲಿಸಿ ಕಂದಾಯ ಇಲಾಖೆಯು ವಾಪಸ್ ಪಡೆದಿರುವ ಯಾವುದಾದರೂ ಗ್ರಾಮದಲ್ಲಿ ಭೂಮಿ ಪಡೆದಿದ್ದಲ್ಲಿ ಆ ಕಡತಗಳ ನಕಲನ್ನು ದೃಢೀಕರಿಸಿ ಕೊಡಿ.
➡️ ಎಫ್ ಎಸ್ ಓ (FSO) ರವರ ಬಳಿ ಇರುವ ಸೆಕ್ಷನ್ 4 (1) ರ ಕಡತಗಳನ್ನು ಪುನರ್ ಪರಿಶೀಲನೆ ಮಾಡಿ ರೈತರಿಗೆ ಆಬ್ಜೆಕ್ಷನ್ ಕೊಡಲು ಮತ್ತೊಮ್ಮೆ ಅವಕಾಶ ಕೊಟ್ಟು ಈ ಹಿಂದೆ ಸರ್ವೇ ಕಾರ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರಿಗೆ ತೊಂದರೆಯಾಗದೆ ಇರುವ ಹಾಗೆ ಕೂಡಲೇ ಇತ್ಯರ್ಥಗೊಳಿಸಬೇಕು.
➡️ ತಹಶೀಲ್ದಾರರು ಗ್ರಾಮಗಳಿಗೆ ಗೋಮಾಳ ನಿಗದಿಗೊಳಿಸಿ, 94 ಸಿ ಮತ್ತು 94 ಸಿಸಿ ಪ್ರಕರಣಗಳನ್ನು ಹಾಗೂ ನಮೂನೆ 50, 53, ಮತ್ತು 57 ಅರ್ಜಿಗಳ ಪ್ರಕರಣಗಳನ್ನು ವಿಲೇವಾರಿ ಮಾಡಿ ನಂತರ ಮುಂದಿನ 50 ವರ್ಷಗಳ ಜನಸಂಖ್ಯೆಯ ಅವಶ್ಯಕತೆಯನ್ನು ಮನಗಂಡು ಉಳಿಕೆ ಭೂಮಿಯನ್ನು ಸರ್ಕಾರಿ ಆದೇಶ ಮತ್ತು ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಶಿಫಾರಸ್ಸು ಮಾಡಬೇಕು.
➡️ ಎಸ್ ಐ ಟಿ ರಚನೆಯಾಗಿ ಕಂದಾಯ ಇಲಾಖೆ ಹಾಗೂ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಸುತ್ತಿದ್ದು ಯಾವ ಮಾರ್ಗ ಸೂಚನೆಯಲ್ಲಿ ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಸರ್ಕಾರದ ಸುತ್ತೋಲೆಗಳನ್ನು ನೀಡಲು ಕೋರಿದೆ ಹಾಗೂ ಇಲ್ಲಿವರೆಗೆ ಆಗಿರುವ ಸರ್ವೇ ಕಾರ್ಯದ ಮಾಹಿತಿಯನ್ನು ಹಾಗೂ ಯಾವ ಗ್ರಾಮದಲ್ಲಿ ಜಂಟಿ ಕಾರ್ಯ ನಡೆಸುತ್ತಿರುವ ಸಮಯದಲ್ಲಿ ಸಾರ್ವಜನಿಕರಿಗೆ ಮತ್ತು ರೈತ ಮಿತ್ರರಿಗೆ ಮಾಹಿತಿ ನೀಡಬೇಕಾಗಿ ಕೋರುತ್ತೇನೆ.
➡️ ಅಕ್ರಮ ಸಕ್ರಮ ಜಮೀನನ್ನು ಫಾರಂ 50 - 53 - 57 ಅಲ್ಲಿ ಹಾಗೂ 94 ಸಿ ಮತ್ತು 94 ಸಿಸಿ ಮಂಜೂರು ಮಾಡಲಾಗದಂತಹ ಅರ್ಜಿಗಳಿಗೆ ಸೂಕ್ತ ಸಕಾರಣವನ್ನು ನೀಡಬೇಕಾಗಿ ಕೋರಿದೆ.
Gallery
Raitha Okkuta
Author at ರೈತ ಒಕ್ಕೂಟ. Passionate about technology and innovation.