ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 11ನೇ ಸ್ಥಾನ - ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಅಭಿನಂದನೆ

R
Raitha Okkuta
• Sep 14, 2026 • 1 min read
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 11ನೇ ಸ್ಥಾನ - ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಅಭಿನಂದನೆ

ಕೊಪ್ಪ ತಾಲೂಕು ನಿಲುವಾಗಿಲಿನ ಅಂಬಿಕಾ ಮತ್ತು ಶಶಿ ಅವರ ಪುತ್ರ ಅಂಶಿತ್ ರವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 11ನೇ ಸ್ಥಾನ ಪಡೆದು ತಾಲೂಕಿನ ಹೆಮ್ಮೆಯನ್ನು ಹೆಚ್ಚಿಸಿದ್ದಾನೆ.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ ಅವರು ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಾಶಯಗಳನ್ನು ಕೋರಿದರು.

 

ಈ ಸಂದರ್ಭದಲ್ಲಿ ಕಾರ್ಬೈಲ್ ಮಂಜುನಾಥ್ ಗೌಡ, ಕಲ್ಮಕ್ಕಿ ಸತೀಶ್, ಪುಟ್ಟಪ್ಪಣ್ಣ, ನಂದೀಶ್, ದಿನೇಶ್ ಹಾಗೂ ರಾಜು ಅವರು ಉಪಸ್ಥಿತರಿದ್ದರು.

Share this article
R

Raitha Okkuta

Author at ರೈತ ಒಕ್ಕೂಟ. Passionate about technology and innovation.