ಕೊಪ್ಪ ತಾಲ್ಲೂಕು ಗುಣವಂತಿ ಗ್ರಾಮದ ಉರುಮಕ್ಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ - ರೈತರೊಂದಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ
S
Sankusha
ಕೊಪ್ಪ ತಾಲ್ಲೂಕು ಗುಣವಂತಿ ಗ್ರಾಮದ ಉರುಮಕ್ಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ವೇಳೆ ಗ್ರಾಮಸ್ಥರು ಭೇಟಿಯಾಗಿ ಈ ಭಾಗದ ಸೆಕ್ಷನ್ 4 ಸಮಸ್ಯೆಯ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ ಹಾಗೂ ಫಾರೆಸ್ಟ್ ಸೆಟಲ್ಮೆಂಟ್ ಆಫೀಸರ್ ಗೆ ಮನವಿ ಸಲ್ಲಿಸಿದ್ದರು ಸಹ ಈವರೆಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿರುವುದಿಲ್ಲ, ಈ ಸಲುವಾಗಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಕಾನೂನು ಹೋರಾಟದ ಸಹಾಯ ನೀಡುವಂತೆ ಮನವಿ ಸಲ್ಲಿಸಿದರು
S
Sankusha
Author at ರೈತ ಒಕ್ಕೂಟ. Passionate about technology and innovation.