ಕಾಡುಕೋಣದ ದಾಳಿಗೊಳಿಗೊಳಗಾದ ಶಿವಪ್ಪ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ
R
Raitha Okkuta
ಜೈಪುರ ಮುಂಡೋಳಲು ಗ್ರಾಮದ ಶಿವಪ್ಪನವರು ಕಾಡುಕೋಣದ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಎರಡು ಶಸ್ತ್ರಚಿಕಿತ್ಸೆಗೊಳಗಾಗಿ, ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಎರಡು ತಿಂಗಳುಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.
ಶೃಂಗೇರಿಯ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ರಾಮಸ್ವಾಮಿ ಶೆಟ್ಟಿಗದ್ದೆ, ರೈತ ಒಕ್ಕೂಟದ ಶೃಂಗೇರಿ ತಾಲೂಕು ಅಧ್ಯಕ್ಷರಾದ ಡಿ ಸಿ ಶಂಕರಪ್ಪ ಹಾಗೂ ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷರಾದ ಅಜಿತ್ ಬಿಕ್ಕಳಿ ಅವರು, ಶಿವಪ್ಪನವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.
R
Raitha Okkuta
Author at ರೈತ ಒಕ್ಕೂಟ. Passionate about technology and innovation.