ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ(DFO) ಶ್ರೀ ಶಿವಶಂಕರ್ ಅವರ ಭೇಟಿ

S
Sankusha
Feb 20, 2026 1 min read
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ(DFO) ಶ್ರೀ ಶಿವಶಂಕರ್ ಅವರ ಭೇಟಿ

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ(DFO) ಶ್ರೀ ಶಿವಶಂಕರ್ ಅವರನ್ನು ಭೇಟಿ ಮಾಡಿ ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. 
ಈ ಸಂದರ್ಭದಲ್ಲಿ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ ಅವರು, ನಾಮ ನಾಗೇಶ್ ಅವರು, ವಕೀಲರಾದ ಸಂತೋಷ್ ಸೇರಿದಂತೆ ಒಕ್ಕೂಟದ ಹಲವು ಸದಸ್ಯರು ಉಪಸ್ಥಿತರಿದ್ದರು.

 

ಚರ್ಚಿಸಲಾದ ಪ್ರಮುಖ ವಿಷಯಗಳು :

 

  • ಈಗಾಗಲೇ ರಚನೆಯಾಗಿರುವ SIT (ಎಸ್ಐಟಿ) ಕುರಿತು ಚರ್ಚೆ ನಡೆಸಲಾಗಿದ್ದು, DFO ರವರು ಇದರ ಉದ್ದೇಶ, ಕಾನೂನು ತೊಡಕುಗಳು ಹಾಗೂ ಲಭ್ಯವಿರುವ ಮಾಹಿತಿಯನ್ನು ವಿವರಿಸಿದರು.

 

  • 1978ರ ಹಿಂದೆಯೇ ಮಂಜೂರಾದ ಜಮೀನಿನ ಸಮಸ್ಯೆಗಳ ಕುರಿತು ಸಹ ಚರ್ಚೆ ನಡೆಯಿತು.

 

  • ಡೀಮ್ಡ್ ಫಾರೆಸ್ಟ್ ವಿಷಯದಲ್ಲಿ ಚರ್ಚಿಸಿದಾಗ ಯಾವ ಯಾವ ಮಾನದಂಡಗಳ ಆಧಾರದ ಮೇಲೆ ಡೀಮ್ಡ್ ಫಾರೆಸ್ಟ್ ನಿರ್ಧರಿಸಲಾಗುತ್ತದೆ ಎಂಬುದನ್ನು DFO ರವರು ವಿವರಿಸಿದರು ಹಾಗೂ ಈಗಾಗಲೇ ಡ್ರೋನ್ ಸರ್ವೆ ನಡೆಸಿ ಸುಮಾರು 7 ಸಾವಿರ ಎಕರೆಗಳನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಕೈಬಿಡಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ರೈತ ಒಕ್ಕೂಟಕ್ಕೆ ಭರವಸೆಯನ್ನು ನೀಡಿದರು.

 

  • 4/1 ನೋಟಿಫಿಕೇಶನ್ ಕುರಿತು ವಿವರವಾಗಿ ಚರ್ಚಿಸಲಾಯಿತು.

 

  • ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ FSO ಅವರ ಕಚೇರಿಯನ್ನು ಕೊಪ್ಪದಲ್ಲಿ ಪ್ರಾರಂಭಿಸುವ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಪ್ರಸ್ತುತ FSO ಕಡೂರು ಅವರ ಅಧಿಕಾರಾವಧಿ ಮುಗಿದಿದ್ದು, ಶೀಘ್ರದಲ್ಲೇ ಹೊಸ ಅಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬ ಮಾಹಿತಿಯನ್ನು ನೀಡಿದರು.

Gallery

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ(DFO) ಶ್ರೀ ಶಿವಶಂಕರ್ ಅವರ ಭೇಟಿ - Image 1
Share this article
S

Sankusha

Author at ರೈತ ಒಕ್ಕೂಟ. Passionate about technology and innovation.