ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಇಂದು ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕು ದಂಡಾಧಿಕಾರಿಗಳ ಭೇಟಿ : ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಇಂದು ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕು ದಂಡಾಧಿಕಾರಿಗಳನ್ನು ಭೇಟಿ ಮಾಡಿ ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಕ್ಷೇತ್ರದ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ರೈತ ಒಕ್ಕೂಟಕ್ಕೆ ಈ ಕೆಳಗಿನ ಮಾಹಿತಿಯನ್ನು ಒದಗಿಸುವಂತೆ ಕೋರಲಾಗಿದೆ:
- 1. ನಮ್ಮ ತಾಲೂಕಿನ ಯಾವ ಯಾವ ಗ್ರಾಮದಲ್ಲಿ ಯಾವ ಯಾವ ಸರ್ವೇ ನಂಬರ್‌ಗಳಲ್ಲಿ ಎಷ್ಟು ವಿಸ್ತೀರ್ಣದ ಗೋಮಾಳದ ಜಾಗವನ್ನು 4/1 ನೋಟಿಫಿಕೇಶನ್ ಮಾಡಲಾಗಿದೆ ಮತ್ತು 17 ಮಾಡಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿ ಯಾವ ಕ್ರಮ ಕೈಗೊಳ್ಳಲಾಗಿದೆ ಮತ್ತು ಯಾವ ಯಾವ ಸರ್ವೇನಂಬರ್‌ಗಳಲ್ಲಿ ಎಷ್ಟು ಕಂದಾಯ ಭೂಮಿ ಉಳಿಸಿಕೊಳ್ಳಲಾಗಿದೆ.
2. 1980 ರ ನಂತರ ಕಂದಾಯ ಭೂಮಿಯಲ್ಲಿ ಯಾರು ಯಾರಿಗೆ ಸಾಗುವಳಿ ಚೀಟಿ ಮತ್ತು ಹಕ್ಕು ಪತ್ರ ನೀಡಲಾಗಿದೆ.
3. ಪ್ರತಿ 100 ಗೋವುಗಳಿಗೆ ಕನಿಷ್ಠ 30 ಎಕರೆ ಗೋಮಾಳವನ್ನು ಮೀಸಲಿಡಬೇಕೆಂದು ಸರ್ಕಾರದ ಆದೇಶ ಇರುವುದು ಸರಿ ಅಷ್ಟೇ, ಈ ಬಗ್ಗೆ ತಾಲೂಕಿನಲ್ಲಿರುವ ಗೋಮಾಳದ ಸಂಖ್ಯೆ ಅನುಗುಣವಾಗಿ ತಾಲೂಕಿನ ಯಾವ ಯಾವ ಗ್ರಾಮದಲ್ಲಿ ಯಾವ ಯಾವ ಸರ್ವೇ ನಂಬರ್ ಅಲ್ಲಿ ಎಷ್ಟು ಎಷ್ಟು ಎಕರೆ ಗೋಮಾಳವನ್ನು ಮೀಸಲಿಡಲಾಗಿದೆ ಮಾಹಿತಿ ತಿಳಿಸಿ.
4. SIT ರಚನೆಯಾಗಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಸುತ್ತಿದ್ದು ಯಾವ ಮಾರ್ಗ ಸೂಚನೆಯಲ್ಲಿ ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಸರ್ಕಾರದ ಸುತ್ತೋಲೆಗಳನ್ನು ನೀಡಲು ಕೋರಿದೆ ಹಾಗೂ ಇಲ್ಲಿವರೆಗೆ ಆಗಿರುವ ಸರ್ವೇ ಕಾರ್ಯದ ಮಾಹಿತಿಯನ್ನು ಹಾಗೂ ಯಾವ ಗ್ರಾಮದಲ್ಲಿ ಜಂಟಿ ಕಾರ್ಯ ನಡೆಸುತ್ತಿರುವ ಸಮಯದಲ್ಲಿ ಸಾರ್ವಜನಿಕರಿಗೆ ಮತ್ತು ರೈತ ಮಿತ್ರರಿಗೆ ಮಾಹಿತಿ ನೀಡಬೇಕಾಗಿ ಕೋರುತ್ತೇನೆ.
5. ಅಕ್ರಮ ಸಕ್ರಮ ಜಮೀನನ್ನು ಫಾರಂ 50-53-57 ಅಲ್ಲಿ ಎಷ್ಟು ಜನಕ್ಕೆ ಮಂಜೂರು ಮಾಡಲಾಗಿದೆ ಹಾಗೂ ಅವರೆಲ್ಲರಿಗೂ ಪಹಣಿ ನೀಡದಿದ್ದಲ್ಲಿ ಸಕಾರಣವನ್ನು ನೀಡಬೇಕಾಗಿ ಕೋರಿಕೆ.
ನಮ್ಮ ಮನವಿಗೆ ಸ್ಪಂದಿಸಿದ ಎರಡೂ ತಾಲ್ಲೂಕಿನ ದಂಡಾಧಿಕಾರಿಗಳು ಈ ಎಲ್ಲ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು ಹಾಗು ಎಲ್ಲಾ ದಾಖಲೆಗಳನ್ನು ಆದಷ್ಟು ಬೇಗ ಒದಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು, ಗೌರವಾಧ್ಯಕ್ಷರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ ರವರು, ರೈತ ಒಕ್ಕೂಟದ ಕ್ಷೇತ್ರ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ರೈತ ಮಿತ್ರರು ಉಪಸ್ಥಿತರಿದ್ದರು.
Gallery
Raitha Okkuta
Author at ರೈತ ಒಕ್ಕೂಟ. Passionate about technology and innovation.