ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಹಾಗೂ ಬೆಳ್ಳಂಗಿ ಭಾಗದ ರೈತರನ್ನು ಭೇಟಿ ಮಾಡಿ ಅವರ ಜಮೀನಿನ ಖಾತೆ, ಸಾಗುವಳ್ಳಿ ಚೀಟಿ (RTC) ಪಡೆಯಲು ಇರುವ ಅಡಚಣೆಗಳ ಬಗ್ಗೆ ಚರ್ಚೆ
R
Raitha Okkuta
ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಹಾಗೂ ಬೆಳ್ಳಂಗಿ ಭಾಗದ ರೈತರನ್ನು ಭೇಟಿ ಮಾಡಿ ಅವರ ಜಮೀನಿನ ಖಾತೆ, ಸಾಗುವಳ್ಳಿ ಚೀಟಿ (RTC) ಪಡೆಯಲು ಇರುವ ಅಡಚಣೆಗಳ ಕುರಿತು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಡನೆ ಚರ್ಚಿಸಿದರು.
1964 ರಲ್ಲೇ ಸುಮಾರು 1000 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಗೆ ರಿಲೀಸ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ, ಇದುವರೆಗೆ ಪಹಣಿ ಇಂಡಿಕರಣ (RTC ಎಂಟ್ರಿ) ಆಗಿಲ್ಲ. ಇದರ ಪರಿಣಾಮವಾಗಿ ರೈತರು ತಮ್ಮ ಭೂಮಿಗೆ ಸಂಬಂಧಿಸಿದ ಮೂಲಭೂತ ದಾಖಲೆಗಳನ್ನು ಪಡೆಯಲಾರದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರೈತರ ಈ ನ್ಯಾಯಸಮ್ಮತ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಮುಟ್ಟಿಸಿ, ಸಮಸ್ಯೆ ಪರಿಹರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಪ್ರಯತ್ನಿಸುವ ಭರವಸೆ ನೀಡಲಾಯಿತು.
Gallery
R
Raitha Okkuta
Author at ರೈತ ಒಕ್ಕೂಟ. Passionate about technology and innovation.